Breadcrumb

CorporateLanding Page Main Banner

Corporate Lending Scroller Navigation

ಅವಲೋಕನ

ಆರ್ಕಾ ದಲ್ಲಿ, ಪ್ರತಿಯೊಂದು ಬ್ಯುಸಿನೆಸ್‌ವು ವಿಶಿಷ್ಟ ಗುರಿಗಳು ಮತ್ತು ಸವಾಲುಗಳನ್ನು ಹೊಂದಿರುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ನಾವು ಪ್ರತಿಯೊಬ್ಬ ಕನ್‌ಸ್ಯೂಮರ್‌ರ ಅಗತ್ಯಗಳಿಗೆ ಸರಿಹೊಂದುವ ಲೋನ್‌ ಸೊಲ್ಯುಷನ್ಸ್‌ ರಚಿಸುವತ್ತ ಗಮನಹರಿಸುತ್ತೇವೆ.

ಎಚ್ಚರಿಕೆಯಿಂದ ಆಲಿಸುವುದು, ಸೃಜನಶೀಲವಾಗಿ ಯೋಚಿಸುವುದು ಮತ್ತು ಸಂಕೀರ್ಣ ಬ್ಯುಸಿನೆಸ್‌ನ ಅವಶ್ಯಕತೆಗಳಿಗಾಗಿ ವಿನ್ಯಾಸಗೊಳಿಸಲಾದ ಫೈನಾನ್ಸಿಯಲ್ ಸೊಲ್ಯುಷನ್ಸ್‌ ಒದಗಿಸುವುದರಲ್ಲಿ ನಮ್ಮ ಶಕ್ತಿ ಅಡಗಿದೆ. ಆಳವಾದ ವೃತ್ತಿ ಜ್ಞಾನ, ನಿಯಂತ್ರಣಗಳ ಬಗ್ಗೆ ಅನುಭವ ಮತ್ತು ಅನುಭೂತಿಯ ಬ್ಯುಸಿನೆಸ್‌ನೊಂದಿಗೆ ಸಂಯೋಜಿತ ಬಲಿಷ್ಠ, ವಿಶ್ವಾಸಾರ್ಹ ಸಂಬಂಧವನ್ನು ನಮ್ಮ ಕನ್‌ಸ್ಯೂಮರ್‌ಗಳ ಜೊತೆಗೆ ಬೆಳೆಸಿಕೊಳ್ಳುತ್ತೇವೆ. ನಾವು ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಅನುಗುಣವಾಗಿ ದೃಢವಾದ ಸೊಲ್ಯುಷನ್ಸ್‌ ನೀಡುತ್ತೇವೆ ಮತ್ತು ಅವುಗಳನ್ನು ಸಮಯೋಚಿತವಾಗಿ ತಲುಪಿಸುತ್ತೇವೆ. ಅದೇ ಕಾರಣಕ್ಕೆ ನಾವು ಹೇಳುವುದು ಆರ್ಕಾ ಜೊತೆಗಿದೆ, ನಿಮಗೆ ಸ್ವಂತ.

ನಮ್ಮ ಕೊಡುಗೆಗಳು 

Bespoke Financial Solutions

ಕಾರ್ಯಕಾರಿ ಬಂಡವಾಳ ಪರಿಹಾರಗಳು

ಬೆಳವಣಿಗೆಯ ನಿಧಿ ಪರಿಹಾರಗಳು

ಪ್ರಶಂಸಾಪತ್ರಗಳು

ಎಲ್ಲವನ್ನು ನೋಡಿ

Asset Publisher

ಪಿಆರ್ ಜಿಂದಾಲ್ ಸಮೂಹವು ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ಜೊತೆಗೆ ಕಳೆದ 3 ವರ್ಷಗಳಿಂದ ಬ್ಯುಸಿನೆಸ್‌ ನಡೆಸುತ್ತಿದೆ. ಅಂದಿನಿಂದ ಜೊತೆಗೂಡಿ ಕೆಲಸ ಮಾಡಿದ ಅದ್ಭುತ ಅನುಭವ ಹೊಂದಿದ್ದೇವೆ. ಆರ್ಕಾ ಪ್ರತಿನಿಧಿಸುವ ಉದ್ಯೋಗ ಸಂಸ್ಕೃತಿ ಮತ್ತು ವೃತ್ತಿಪರ ನೀತಿಗಳು ಬ್ಯುಸಿನೆಸ್‌ನಲ್ಲಿಯೇ ಅತ್ಯುತ್ತಮ ಬ್ಯುಸಿನೆಸ್‌ಗಳಲ್ಲಿ ಒಂದು ಎಂದು ಹೇಳಬಹುದು. ನಾವು ಆರ್ಕಾ ದೊಂದಿಗೆ ವಿವಿಧ ಅವಧಿ ಲೋನ್‌ಗಳನ್ನು ಮಂಜೂರು ಮಾಡಿದ್ದೇವೆ ಮತ್ತು ಕನ್‌ಸ್ಯೂಮರ್‌ಗಾಗಿಯೇ ನಾವು ಎಲ್ಲಾ ವಹಿವಾಟುಗಳನ್ನು ನಿಗದಿತ ಸಮಯದೊಳಗೆ ಯಶಸ್ವಿಯಾಗಿ ಮತ್ತು ಸುಗಮವಾಗಿ ಮುಕ್ತಾಯಗೊಳಿಸಿದ್ದಕ್ಕಾಗಿ ಕೃತಜ್ಞರಾಗಿರುತ್ತೇವೆ.

ಆರ್ಕಾ ದ ಜೊತೆಗೆ ಬ್ಯುಸಿನೆಸ್‌ ಸುಗಮವಾಗಿ ಮತ್ತು ವೇಗದ ಪ್ರತಿಸ್ಪಂದನೆಯ ಜೊತೆಗೆ ಮುಗಿಯುತ್ತದೆ ಎನ್ನುವ ಅನುಭವ ಹೊಂದಿದ್ದೇವೆ. ದೀರ್ಘ ಸಮಯದವರೆಗೆ ಇದೇ ರೀತಿಯ ಸಂಬಂಧ ಮುಂದುವರಿಸುವ ನಿರೀಕ್ಷೆ ಹೊಂದಿದ್ದೇವೆ.

ಹೆಚ್ಚು ಓದಿ

ಕಳೆದ 2 ವರ್ಷಗಳಿಗೂ ಹೆಚ್ಚು ಸಮಯದಿಂದ ನಾವು ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ಜೊತೆಗೆ ವ್ಯವಹರಿಸುತ್ತಿದ್ದೇವೆ, ಈ ವರ್ಷಗಳಲ್ಲಿ ನಾವು ಆರ್ಕಾ ಜೊತೆಗೆ ಬಹಳ ಉತ್ತಮ ಪಾಲುದಾರಿಕೆಯನ್ನು ಬೆಳೆಸಿಕೊಂಡಿದ್ದೇವೆ. ಆರ್ಕಾ ಬಹಳ ವೃತ್ತಿಪರ, ಪರಿಣಾಮಕಾರಿ ಮತ್ತು ಬೆಂಬಲ ನೀಡುವ ಟೀಮ್ ಅನ್ನು ಹೊಂದಿದೆ. ನಾವು ಅವರೊಂದಿಗೆ ಕೆಲವು ದೊಡ್ಡ ವಹಿವಾಟುಗಳನ್ನು ಮಾಡಿದ್ದೇವೆ, ಆರ್ಕಾ ಅವರ ದಕ್ಷ ಟೀಮ್ ಮತ್ತು ವೃತ್ತಿಪರ ಮನೋಭಾವದಿಂದಾಗಿ ಈ ವಹಿವಾಟುಗಳು ನಿಜವಾಗಿಯೂ ಸಾಕಷ್ಟು ಸರಾಗವಾಗಿ, ಯಶಸ್ವಿಯಾಗಿ ಮತ್ತು ಮುಖ್ಯವಾಗಿ ಬದ್ಧ ಸಮಯಾವಧಿಯಲ್ಲಿ ಪೂರ್ಣಗೊಂಡಿವೆ.
ಎರಡೂ ಕಂಪನಿಗಳ ಬೆಳವಣಿಗೆಗೆ ಪರಸ್ಪರ ಸಹಾಯ ಮಾಡುವಂತಹ ದೀರ್ಘಾವಧಿಯ ಸಂಬಂಧವನ್ನು ಆರ್ಕಾ ಜೊತೆಗೆ ನಾವು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ನೊಂದಿಗೆ ಬ್ಯುಸಿನೆಸ್‌ ಫಲಪ್ರದ ಮತ್ತು ತೃಪ್ತಿಕರ ಅನುಭವವಾಗಿದೆ. ಆರ್ಕಾ ಟೀಮ್ ನಮ್ಮ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಕಾರಣದಿಂದ ಎರಡೂ ಪಕ್ಷಗಳಿಗೆ ಪರಸ್ಪರ ಸ್ವೀಕಾರಾರ್ಹ ರೀತಿಯಲ್ಲಿ ನಿಯಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗಿದೆ. ಕೆಲಸಗಳು ಅತಿ ಬೇಗನೆ ಮುಗಿದವು, ಮತ್ತು ಆರ್ಕಾ ಟೀಮ್ ಅತ್ಯುನ್ನತ ಮಟ್ಟದ ವೃತ್ತಿಪರತೆಯನ್ನು ಕಾಯ್ದುಕೊಂಡಿದೆ. ಭವಿಷ್ಯದಲ್ಲಿ ಇನ್ನೂ ಅನೇಕ ಸಂವಹನ ಮತ್ತು ವಹಿವಾಟು ಅವಕಾಶಗಳನ್ನು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ನಮ್ಮ ಹಣಕಾಸಿನ ಅವಶ್ಯಕತೆಗಳಿಗೆ ತ್ವರಿತವಾದ ಸೊಲ್ಯುಷನ್ಸ್‌ ಒದಗಿಸುವಲ್ಲಿ ಟೀಮ್ ನಮಗೆ ತುಂಬಾ ಬೆಂಬಲ ಮತ್ತು ಪ್ರೋತ್ಸಾಹ ನೀಡಿದೆ. ಇದಲ್ಲದೆ, ಸಂಪೂರ್ಣ ಮಂಜೂರಾತಿ ಮತ್ತು ವಿತರಣಾ ಪ್ರಕ್ರಿಯೆಯನ್ನು ಗಮನಾರ್ಹ ಸಮಯದೊಳಗೆ ಮುಗಿಸಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಆರ್ಕಾ ದ ಆಪರೇಶನಲ್ ಮತ್ತು ಮ್ಯಾನೇಜ್‌ಮೆಂಟ್ ಟೀಮ್‌ನೊಂದಿಗೆ ನಾವು ಅತ್ಯುತ್ತಮವಾದ ಕೆಲಸದ ಸಮೀಕರಣವನ್ನು ಹೊಂದಿದ್ದೇವೆ. ನಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ತಕ್ಕಂತೆ ಚೆನ್ನಾಗಿ ಹೊಂದಿಕೊಂಡು ಕಾರ್ಯನಿರ್ವಹಿಸಿದ್ದಾರೆ. ಟೀಮ್‌ನೊಂದಿಗೆ ಈ ಆರೋಗ್ಯಕರ ಸಂಬಂಧವನ್ನು ಮುಂದುವರಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಮೊದಲಿಗೆ, ನಮ್ಮೊಂದಿಗಿನ ಸಂಬಂಧ ಮುಂದುವರೆಸಿರುವುದು ಮತ್ತು ಬೆಳೆಸಿರುವುದಕ್ಕಾಗಿ ಆರ್ಕಾ ಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಕಳೆದ 15 ತಿಂಗಳುಗಳಲ್ಲಿ ನಮ್ಮ ಪರಿವರ್ತನೆಯ ಪ್ರಯಾಣದಲ್ಲಿ ನಮಗೆ ಸ್ಪಷ್ಟವಾಗಿ ಬೆಂಬಲ ನೀಡಿ ಜೊತೆಗಿದ್ದ ಟೀಮ್‌ನೊಂದಿಗೆ ಸಮೃದ್ಧವಾದ ಸಂಬಂಧವನ್ನು ಆನಂದಿಸುತ್ತೇವೆ. ಆರ್ಕಾ ನಮ್ಮ ವಿನಂತಿಗಳನ್ನು ನಿಯತಕಾಲಿಕವಾಗಿ ಪೂರೈಸಲು ಮುಕ್ತವಾಗಿತ್ತು ಮತ್ತು ನಾವು ಬಾಧ್ಯತೆಗಳನ್ನು ಸಕಾಲಿಕವಾಗಿ ಪೂರೈಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಭವಿಷ್ಯದಲ್ಲಿ ಇನ್ನೂ ಅನೇಕ ಬ್ಯುಸಿನೆಸ್‌ಗಳಲ್ಲಿ ಜೊತೆಗೂಡಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇವೆ.

ಹೆಚ್ಚು ಓದಿ

ಅರ್ಕಾ ಫಿನ್‌ಕ್ಯಾಪ್ ಲಿಮಿಟೆಡ್ ನ ಮೊದಲ ಕನ್‌ಸ್ಯೂಮರ್‌ರಲ್ಲಿ ಒಬ್ಬರೆಂದು ಹೇಳಲು ಸ್ಟರ್ಲೈಟ್ ಪವರ್ ಹೆಮ್ಮೆಪಡುತ್ತದೆ. ವರ್ಷಗಳಲ್ಲಿ ಬೆಸೆಯಲಾಗಿರುವ ಬಲವಾದ ಸಂಬಂಧವನ್ನು ನಾವು ಬಹಳ ಗೌರವಿಸುತ್ತೇವೆ. ಆರ್ಕಾ ಸದಾ ಬ್ಯುಸಿನೆಸ್‌ನ ಅವಶ್ಯಕತೆಗಳು, ವಹಿವಾಟು ರಚನೆಗಳನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳುತ್ತದೆ ಮತ್ತು ಫೈನಾನ್ಸಿಯಲ್ ಸೊಲ್ಯುಷನ್ಸ್‌ ಒದಗಿಸುವಲ್ಲಿ ಪೂರ್ವಭಾವಿಯಾಗಿ ಕೆಲಸ ಮಾಡಿದೆ. ಆರ್ಕಾ ಟೀಮ್ನ ಅತ್ಯಂತ ಪ್ರಭಾವಶಾಲಿ ಅಂಶವೆಂದರೆ ಮಂಜೂರಾತಿಯಿಂದ ಹಿಡಿದು ವಿತರಣೆಯವರೆಗಿನ ಸಂಪೂರ್ಣ ಹಣಕಾಸಿನ ವಹಿವಾಟನ್ನು ಅವರು ತ್ವರಿತವಾಗಿ ಪೂರ್ಣಗೊಳಿಸುವುದು. ನಾವು ಅರ್ಕಾ ಫಿನ್‌ಕ್ಯಾಪ್ ನೊಂದಿಗಿನ ನಮ್ಮ ಸಂಬಂಧವನ್ನು ಗೌರವಿಸುತ್ತೇವೆ ಮತ್ತು ಭವಿಷ್ಯದಲ್ಲಿ ಅವರಿಗೆ ಉತ್ತಮ ಯಶಸ್ಸನ್ನು ಹಾರೈಸುತ್ತೇವೆ.

ಹೆಚ್ಚು ಓದಿ