ಅಮನ್ ಕಿರ್ಲೋಸ್ಕರ್
ಅಡಿಷನಲ್ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್
ಶ್ರೀ ಅಮನ್ ಕಿರ್ಲೋಸ್ಕರ್ ಅವರು ಮೇ 2018 ರಲ್ಲಿ ಕಿರ್ಲೋಸ್ಕರ್ ಚಿಲ್ಲರ್ಸ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಸಪ್ಲೈ ಚೈನ್ ವ್ಯವಸ್ಥಾಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಆಗಸ್ಟ್ 2019ರಲ್ಲಿ ಅವರು ಕಿರ್ಲೋಸ್ಕರ್ ಪ್ನ್ಯೂಮ್ಯಾಟಿಕ್ ಕಂಪನಿ ಲಿಮಿಟೆಡ್ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಸೇರಿದರು. 2020 ರಲ್ಲಿ, ಅವರನ್ನು ಜನರಲ್ ಮ್ಯಾನೇಜರ್ (ಆಪರೇಷನ್ಸ್) ಆಗಿ ಬಡ್ತಿ ನೀಡಲಾಯಿತು ಮತ್ತು ಅಂದಿನಿಂದ ಅವರು ಉತ್ಪಾದನೆ, ಸರಬರಾಜು ಸರಪಳಿ, ಫೌಂಡ್ರಿ, ಪ್ಲಾಂಟ್ ಎಂಜಿನಿಯರಿಂಗ್ ಮತ್ತು ಏರ್ ಕಂಪ್ರೆಸರ್ ಮತ್ತು ಟ್ರಾನ್ಸ್‌ಮಿಷನ್ ವಿಭಾಗಗಳ ಗುಣಮಟ್ಟವನ್ನು ನಿರ್ವಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಕೋವಿಡ್ ಎರಡನೇ ಅಲೆ ಸಮಯದಲ್ಲಿ ದೇಶಕ್ಕೆ ಆಕ್ಸಿಜನ್ ಮತ್ತು ಅದನ್ನು ಉತ್ಪಾದಿಸಲು ಅಗತ್ಯವಿರುವ ಯಂತ್ರಗಳ ತುರ್ತು ಅಗತ್ಯವಿದ್ದಾಗ ಸ್ಕ್ರೂ ಕಂಪ್ರೆಸರ್ಸ್ ಉತ್ಪಾದನೆಯನ್ನು ಹೆಚ್ಚಿಸಲು ಅವರು ಪ್ರಮುಖ ಪಾತ್ರವಹಿಸಿದರು. ನಂತರ ಅವರು 2023 ರಲ್ಲಿ ಹವಾನಿಯಂತ್ರಣ ಮತ್ತು ಶೈತ್ಯೀಕರಣ ವ್ಯವಹಾರ ಘಟಕದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಈ ಪಾತ್ರದಲ್ಲಿ ಅವರು ಹೊಸ ಉತ್ಪನ್ನಗಳನ್ನು ಪ್ರಾರಂಭಿಸಲು ಮತ್ತು ಮಾರಾಟ ಮಾಡಲು ಮತ್ತು ವಿಭಾಗದ ಒಟ್ಟಾರೆ ಮಾರಾಟ ಮತ್ತು ಲಾಭದಾಯಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಲು ಸಹಾಯ ಮಾಡಿದ್ದಾರೆ.
ಅವರು ಗ್ರೂಪ್ ಲೆವೆಲ್ ಮುಂದಾಳತ್ವಗಳನ್ನು ಕೂಡ ಮುನ್ನಡೆಸುತ್ತಿದ್ದಾರೆ, ವಿಶೇಷವಾಗಿ (ESG )ಇಎಸ್‌ಜಿ ಕಂಪ್ಲೈಯನ್ಸ್ ಕ್ಷೇತ್ರದಲ್ಲಿ. ಅವರು ಗ್ರೂಪ್ ಲೆವೆಲ್ ಎನ್ವಿರಾನ್ಮೆಂಟ್ ಕನ್ಸರ್ವೇಶನ್ ಕಮಿಟಿಯ ಅಧ್ಯಕ್ಷರಾಗಿದ್ದು, ವಿವಿಧ ಬಿಸಿನೆಸ್ ಯುನಿಟ್‌ಗಳಲ್ಲಿ ಸಸ್ಟೈನಬಿಲಿಟಿ, ಗ್ರೀನ್ ಟೆಕ್ನಾಲಜಿ ಮತ್ತು ಸರ್ಕ್ಯುಲರ್ ಎಕಾನಮಿಗೆ ಸಂಬಂಧಿಸಿದ ಉಪಕ್ರಮಗಳನ್ನು ಮುನ್ನಡೆಸುತ್ತಾರೆ